Sunday, January 11, 2009


ಪ್ರಿಯ ಕಲಾವಿದರೆ,

ಹೊಸ ತಂತ್ರಜ್ಞಾನದ ಆರ್ಭಟದ ಮಧ್ಯೆ ನಮ್ಮ ಭಾಷೆ, 'ನಮ್ಮತನ' ತೆರೆಮರೆಗೆ ಸರಿಯುತ್ತಿದೆಯೇ?
ಬರುವ ದಿನಗಳಲ್ಲಿ ನಮ್ಮದೆಂಬ ಭಾಷೆಯ ಸೌಗಂಧ ಮಸುಕಾಗುವುದೇ? ಹಾಗಂತ ನಿಮಗೆ ಅನ್ನಿಸ್ತಿದೆಯಾ?
ಈ ಬಗೆಯ ತಳಮಳಗಳಿಗೆ ಉತ್ತರ ವಾಗಿ, http://www.kannadasaahithya.com/ ಸಹಯೋಗದೊಂದಿಗೆ, http://www.samvaada.com/ ಒಂದು ಕಲಾ ಪ್ರದರ್ಶನವನ್ನು ಆಯೋಜಿಸುತ್ತಿದೆ.

'ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ದೇಸಗತಿ ಭಾಷೆ'

ಇದು, ದೇಶೀಯ ಭಾಷೆಗಳನ್ನ ಬಳಸಿ ಇಂದಿನ ಐಟಿ ತಂತ್ರಜ್ಞಾನವನ್ನ ಬಲಪಡಿಸುವ ಸಾಧ್ಯತೆಗಳ ನಿಟ್ಟಿನಲ್ಲಿ ಒಂದು ಪ್ರಯತ್ನ. ಐಟಿ ಕ್ಷೇತ್ರದಲ್ಲಿ ಸರ್ವವ್ಯಾಪಿಯಾಗಿ ಇಂಗ್ಲೀಷ್ ಒಂದೇ ಆವರಿಸಿರುವ ಈಗಿನ ಕಾಲಘಟ್ಟದಲ್ಲಿ, ದೇಶೀಯ ಭಾಷೆಗಳೆಡೆ ಈ ಅಸಡ್ಡೆ ಹೀಗೇ ಮುಂದುವರಿದಲ್ಲಿ, ಅವು 'ಮೃತ' ಭಾಷೆಗಳ ಸಾಲಿಗೆ ಸೇರುವ ಆತಂಕ ಇಲ್ಲದಿಲ್ಲ. ಈ ಅವಗಣನೆಯನ್ನ ಹೋಗಲಾಡಿಸುವ ನಿಟ್ಟಿನಲ್ಲಿ ನೆಡೆಯುತ್ತಿರುವ ಪ್ರಯತ್ನಗಳಿಗೆ, ನಿಮ್ಮ ಕಲಾಭಿವ್ಯಕ್ತಿಯ ಮಾಧ್ಯಮದ (ಚಿತ್ರಕಲೆ, ವ್ಯಂಗ್ಯ ಚಿತ್ರಕಲೆ) ಮೂಲಕ ಬೆಂಬಲಿಸುವ ಅವಕಾಶ ನಿಮಗೆ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶ.

ಬೆಂಗಳೂರಿನಲ್ಲಿ ನಡೆಯಲಿರುವ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆ ಇದ್ದಲ್ಲಿ, ನಿಮ್ಮ ಸ್ವ-ವಿವರಗಳೊಂದಿಗೆ ನೋಂದಾಯಿಸಿಕೊಳ್ಳಿ.
ನಿಮ್ಮ ಭಾವಚಿತ್ರ ಹಾಗೂ ಇತರ ವಿವರಗಳನ್ನು ಕಳುಹಿಸಲು ಈ-ಮೇಲ್ ವಿಳಾಸ info@samvaada.com
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :ಪ್ರಮೋದ್. ಪಿ.ಟಿ. +91 9448701470(ಸಂವಾದ.ಕಾಂ ನ ಪರವಾಗಿ)

Monday, January 5, 2009

ದೇಸಗತಿ ಭಾಷೆ ಮತ್ತು ಮಾಹಿತಿ ತಂತ್ರಜ್ಞಾನ

ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯ.ಕಾಂ ಸಾಹಿತ್ಯದ ಅತ್ಯುತ್ತಮ ನೆಲೆಯಾಗಿರುವಂತೆಯೇ, ಮಾಹಿತಿ ತಂತ್ರಜ್ಞಾನ ಕಲ್ಪಿಸುವ ಯಾವುದೇ ತಂತ್ರಜ್ಞಾನವನ್ನು ಬಳಸದೆ ಬಿಟ್ಟಿಲ್ಲಾ. ಹೀಗೆ ಬಳಸುವಾಗ ತಂತ್ರಜ್ಞಾನದ ಅಗತ್ಯ-ಕೊರತೆ ಇತ್ಯಾದಿಗಳನ್ನೆಲ್ಲ ಅವಲೋಕಿಸಿ ತಂತ್ರಜ್ಞಾನ ಕುರಿತಂತೆ ನಮ್ಮ "ದೇಸಗತಿ ಭಾಷೆ"ಗೆ ತಕ್ಕಂತೆ ರೂಪಿಸಬೇಕಾದರೆ ಬೇಕಾಗಿರುವ ಪರಿಸರ ನಿರ್ಮಾಣಕ್ಕೆ ಒತ್ತು ಕೊಡಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಹೀಗಾಗಿ ಕನ್ನಡಸಾಹಿತ್ಯ.ಕಾಂ ಇಂದು ಸಾಹಿತ್ಯ ತಂತ್ರಜ್ಞಾನಕ್ಕೆ ಅತ್ಯುತ್ತಮ ನೆಲೆಯಾಗಿದೆ.

೧. ದೇಸಗತಿ ಭಾಷೆ ಎಂದರೇನು ?
ಸಾಮಾಜಿಕ ರಾಜಕೀಯ ಅಥವಾ ಯಾವುದೇ 'ಪ್ರಾದೇಶಿಕತೆ' ಸ್ಥಳಿಯ ಇತ್ಯಾದಿ ವ್ಯಾಪ್ತಿಗಳನ್ನು ಚರ್ಚಿಸಲಾಗುತ್ತದೆ. ದೇಸಗತಿ ಭಾಷೆ ಎಂಬುದು ಭಾರತದ ಯಾವುದೇ ಕುಟುಂಬದ ಮಾತಿರಬಹುದು. ಆ ಮಾತು, ಭಾಷೆಗೆ ತಕ್ಕಂತೆ ಮಾಹಿತಿ ತಂತ್ರಜ್ಞಾನವು ಇರಬೇಕು ಎಂದೆನ್ನುವುದು ಕನ್ನಡ ಸಾಹಿತ್ಯ.ಕಾಂನ ನಿಲವು. ದೇಸಗತಿ ಭಾಷೆಗೆ ಹೊರತಾದ ಭಾಷೆಯಲ್ಲೆ ಕಂಪ್ಯೂಟರ್ ಬಳಸಬೇಕೆನ್ನುವ ರೀತಿ, ಪರಿಸರ ಮಾತ್ರ ಇದ್ದರೆ ಅದ್ದನ್ನು ವಸಾಹತುಶಾಹಿ (ಕಾಲೋನಿಯಲಿಸಂ) ಅಥವಾ ಮಾಹಿತಿ ವಸಾಹತುಶಾಹಿ (ಇನ್ಫ಼ೊ ಕಾಲೋನಿಯಲಿಸಂ) ಅನ್ನುವುದು ಸಹ ಕನ್ನಡ ಸಾಹಿತ್ಯ.ಕಾಂ ನಿಲುವು.

೨.ಕನ್ನಡ ಸಾಹಿತ್ಯ.ಕಾಂ ಮಾಹಿತಿ ತಂತ್ರಜ್ಞಾನದ ಪರಿಸರದಲ್ಲಿ ದೇಸಗತಿ ಭಾಷೆಯ ಪರಿಸರಕ್ಕೆ ಒತ್ತಾಯಿಸಿ ಅರ್ಪಿಸಬೇಕೆಂದಿರುವ ಮನವಿಗೆ ರಾಜ್ಯದ ಹೆಸರಾಂತ ವ್ಯಕ್ತಿಗಳಲ್ಲದೆ ಅಮೇರಿಕ, ನ್ಯು ಜಿಲ್ಯಾಂಡ್, ಸಿಂಗಾಪುರ ಮುಂತಾದ ರಾಷ್ಟ್ರಗಳಲ್ಲಿ ನೆಲಸಿರುವವರೆಲ್ಲರೂ ಸಹಿ ಹಾಕುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಈ ಮನವಿಯನ್ನು ಅರ್ಪಿಸಲು ಕನ್ನಡಸಾಹಿತ್ಯ.ಕಾಂ ಮತ್ತು ಸಂವಾದ.ಕಾಂ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದೆ. ಅದರ ಅಂಗವಾಗಿ "ದೇಸಗತಿ ಭಾಷೆ ಮತ್ತು ಮಾಹಿತಿ ತಂತ್ರಜ್ಞಾನ"- ಕುರಿತಂತೆ ನನ್ನ ಪ್ರತಿಕ್ರಿಯೆ ಎಂಬ ವಸ್ತುವನ್ನಾಧರಿಸಿದ ನಾಟಕ, ಚಲನಚಿತ್ರ, ಚಿತ್ರ ಕಲಾಕೃತಿಗಳ ಪ್ರದರ್ಶನವೂ ಇರುತ್ತದೆ. ಈ ಚಿತ್ರಕಲಾ ಪ್ರದರ್ಶನದ ಭಾಗವಾಗಿ ಈಗಾಗಲೆ ಪ್ರತಿಕ್ರಯಿಸುವ ಕಲಾವಿದರುಗಳ ವಿವರ ಇಲ್ಲಿದೆ .

ರಾಜ್ಯದ ಉಳಿದೆಡೆ ಇರುವ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಬೇಕು ಎಂದೆನ್ನುವ ಇಚ್ಛೆವುಳ್ಳವರು ಪ್ರಮೋದ್ : 9448701470 ಮತ್ತು ಕಿರಣ್: 9731755966 ರನ್ನು ಸಂಪರ್ಕಿಸಬೇಕಾಗಿ ಮನವಿ.